Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಬ್ರಹ್ಮ` ಚಿತ್ರಕ್ಕೆ ಟಾಕಿ ಮುಕ್ತಾಯ
Posted date: 10 Tue, Sep 2013 – 10:10:04 AM

ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು(ಅಮೃತಹಳ್ಳಿ) ನಿರ್ಮಿಸುತ್ತಿರುವ ‘ಬ್ರಹ್ಮ ಚಿತ್ರಕ್ಕೆ
ಮಾತಿನ ಭಾಗದ(ಟಾಕಿ) ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡು ಹಾಗೂ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ.
      ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.  ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್‌ದೇವ್, ಸೋನು ಸೂಧ್,
ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್,
ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
     ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ ‘ಬ್ರಹ್ಮ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಬ್ರಹ್ಮ` ಚಿತ್ರಕ್ಕೆ ಟಾಕಿ ಮುಕ್ತಾಯ - Chitratara.com
Copyright 2009 chitratara.com Reproduction is forbidden unless authorized. All rights reserved.